ಬೆಂಗಳೂರು: ಹೆಚ್.ಡಿ.ಕುಮಾರಸ್ವಾಮಿ ವಿರುದ್ದ ಮಾಡಿರುವ ರೂ.150 ಕೋಟಿ ಗಣಿ ಕಪ್ಪದ ಆರೋಪಕ್ಕೆ ಸಂಬಂಧಿಸಿದಂತೆ ಮೂರುವ ವಾರಗಳಲ್ಲಿ ವಿಶೇಷ ತನಿಖಾ ಸಂಸ್ಥೆಗೆ ಸಾಕ್ಷ್ಯ ಸಲ್ಲಿಕೆ ಮಾಡುತ್ತೇನೆಂದು ಬಳ್ಳಾರಿ ಗಣಿ ಧಣಿ ಹಾಗೂ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯವರು ಶುಕ್ರವಾರ ಹೇಳಿದ್ದಾರೆ.
ಅಕ್ರಮ ಗಣಿಗಾರಿಕೆ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ವಿಶೇಷ ತನಿಖಾ ಸಂಸ್ಥೆ ಸೂಚನೆ ಮೇರೆಗೆ ತನಿಖಾಧಿಕಾರಿಗಳ ಮುಂದೆ ನಿನ್ನೆ ವಿಚಾರಣೆಗೆ ಹಾಜರಾಗಿದ್ದ ರೆಡ್ಡಿ ಅವರು, ತಮ್ಮ ಆರೋಪಕ್ಕೆ ಪೂರಕ ದಾಖಲೆ ನೀಡಲು ಸಮಯಬೇಕು ಎಂಬ ಮನವಿ ಮುಂದಿಟ್ಟರು. ಇದನ್ನು ಪುರಸ್ಕರಿಸಿದ ಅಧಿಕಾರಿಘಳು ಸಮಯ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಹೀಗಾಗಿ ಸುಮಾರು 10 ವರ್ಷಗಳ ಹಿಂದಿನ ಈ ಪ್ರಕರಣ ಕುರಿತು ಜನಾರ್ದನರೆಡ್ಡಿ ಯಾವೆಲ್ಲಾ ಸಾಕ್ಷ್ಯಗಳನ್ನು ಒದಗಿಸುತ್ತಾರೆಂಬ ಕುತೂಹಲ ರಾಜ್ಯ ರಾಜಕಾರಣದಲ್ಲಿ ತೀವ್ರವಾಗಿದೆ. ಹೆಬ್ಬಾಳದ ಜಿಕೆವಿಕೆ ಆವರಣದಲ್ಲಿರುವ ಎಸ್ಐಟಿ ಕಚೇರಿಯಲ್ಲಿ ವಿಚಾರಣೆ ಮುಗಿಸಿ ಹೊರ ಬಂದು ಸುದ್ದಿಗಾರರೊಂದಿಗೆ ಮಾತನಾಡಿದ ರೆಡ್ಡಿಯವರು, ಗಣಿಕಪ್ಪ ಆರೋಪದ ಸಿಡಿ ಬಗ್ಗೆ ಅಧಿಕಾರಿಗಳು ಯಾವುದೇ ರೀತಿ ಪ್ರಶ್ನಿಸಲಿಲ್ಲ. ಆದರೆ, ನನ್ನ ಆರೋಪಕ್ಕೆ ಸಂಬಂಧಿದಂತೆ ಸಾಕ್ಷ್ಯಾಧಾರಗಳ ಮಾಹಿತಿ ಕೇಳಿದ್ದಾರೆ. ಈ ಮಾಹಿತಿ ನೀಡಲು ನಾನು ಸಮಯ ಪಡೆದಿದ್ದೇನೆ ಎಂದರು.
3 ವಾರಗಳಲ್ಲಿ ನನ್ನ ಆರೋಪಕ್ಕೆ ಸಾಕ್ಷ್ಯಾಧಾರಗಳನ್ನು ತನಿಖಾ ತಂಡಕ್ಕೆ ಸಲ್ಲಿಕೆ ಮಾಡುತ್ತೇನೆ. ಪ್ರಕರಣದ ತನಿಖೆಗೆ ಸ್ಪಂದಿಸುತ್ತೇನೆಂದು ತಿಳಿಸಿದರು.
2006ರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ವಿಧಾನಪರಿಷತ್ ಸದಸ್ಯರಾಗಿದ್ದ ಜನಾರ್ದನ ರೆಡ್ಡಿಯವರು, ವಿಧಾನಸಭಾ ಅಧಿವೇಶನದಲ್ಲೇ ಅಂದಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಅರಣ್ಯ ಸಚಿವ ಸಿ.ಚನ್ನಿಗಪ್ಪ ವಿರುದ್ಧ ಬಳ್ಳಾರಿ ಗಣಿ ಮಾಲೀಕರಿಂದ ಹಣ ಸಂಗ್ರಹಿಸಿದ್ದಾರೆಂದು ಆರೋಪಿಸಿದ್ದರು. ಆರೋಪ ಹಿನ್ನಲೆಯಲ್ಲಿ ಎಸ್ಐಟಿ ರೆಡ್ಡಿಯವರಿಗೆ ನೋಟಿಸ್ ಜಾರಿ ಮಾಡಿತ್ತು.









ಚೆನ್ನೈ, ಮೇ 14-ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರ ಸಾವಿನ ನಂತರ ಅವರ ಆತ್ಮ ತನ್ನ ನಿವಾಸ ಸುತ್ತ ಅಲೆದಾಡುತ್ತಿದೆ ಎಂಬ ಹಲವು ವದಂತಿಗಳು ಹರಡುತ್ತಿದ್ದು , ಅದಕ್ಕೆ ಪುಷ್ಟಿ ನೀಡುವಂತೆ ಹಲವು ದಿನಗಳಿಂದ ಅಮ್ಮನ ನಿವಾಸ ಪೋಯಸ್ ಗಾರ್ಡನ್‍ನಲ್ಲಿ ಯಾರೋ ಅಳುವ, ಗೋಳಿಡುವ ಸದ್ದು ಕೇಳಿಬರುತ್ತಲೇ ಇದೆಯಂತೆ. ಅಷ್ಟೇ ಅಲ್ಲದೆ ಜಯಲಲಿತಾ ಅವರ ಸಮಾಧಿ ಸ್ಥಳವಾದ ಮರೀನಾ ಬೀಚ್‍ನಲ್ಲೂ ಅಂಥದೊಂದು ಅಳು ಕೇಳಿಬರುತ್ತಿದ್ದು , ಸಮಾಧಿ ಕಾವಲಿಗಿರುವ ಸೆಕ್ಯುರಿಟಿಗಳು ಕೂಡ ಅಮ್ಮನ ಆತ್ಮವಿದೆ ಎಂದೇ ಹೇಳುತ್ತಿದ್ದಾರೆಯತೆ. ಸಮಾಧಿ ಸ್ಥಳದಲ್ಲಿ ಇದುವರೆಗೂ 20 ಭದ್ರತಾ ಸಿಬ್ಬಂದಿಗಳು ಬದಲಾಗಿದ್ದು, ಯಾರೊಬ್ಬರೂ ಇಲ್ಲಿ ಕಾವಲು ನಿರ್ವಹಿಸಲು ಹಿಂಜರಿಯುತ್ತಿದ್ದಾರೆ. ಈ ಬಗ್ಗೆ ತಮಿಳುನಾಡಿನ್ಯಾದಂತ ಕೋಪೋದ್ರಿಕ್ತ ಭೂತ( ಆತ್ಮ)ದ ಬಗ್ಗೆ ಭಾರೀ ಗುಸುಗುಸು, ಚರ್ಚೆಗಳು ನಡೆಯುತ್ತಿವೆ.
