ಉದ್ಯಮಿ ದಂಡಪಾಣಿ ಅವರ ಮನೆ ಮೇಲೆ ಪೊಲೀಸರು ದಾಳಿ!?

ಚೆನ್ನೈ, -ಅವ್ಯವಹಾರ ಗಳ ಆರೋಪದ ಮೇಲೆ ಬಿಜೆಪಿ ಮುಖಂಡ ಮತ್ತು ಉದ್ಯಮಿ ದಂಡಪಾಣಿ ಅವರ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ ವೇಳೆ ಅಮಾನೀಕರಣ  ಗೊಂಡ 45 ಕೋಟಿ ರೂ. ನೋಟುಗಳು ಪತ್ತೆಯಾಗಿವೆ. ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಅಶೋಕ ನಗರ ಪೊಲೀಸರು ಚೆನ್ನೈ ಚೊಲೈ ಮೇಡುವಿನಲ್ಲಿರುವ ದಂಡ ಪ್ಪಾಣಿ ಮನೆ ಮೇಲೆ ಇಂದು ಬೆಳಗ್ಗೆ ದಾಳಿ ನಡೆಸಲಾಗಿದೆ. ಪರಿಶೀಲನೆ ನಡೆಸಿದಾಗ 500 ಮತ್ತು 1000 ರೂ. ಮುಖಬೆಲೆಯ 45 ಕೋಟಿ ರೂಪಾಯಿ ಹಳೇ ನೋಟುಗಳು ಪತ್ತೆಯಾದವು.

ರಾಮಲಿಂಗಂ ಅಂಡ್ ಕೋ ಸಂಸ್ಥೆಯ ಮಾಲೀಕರಾದ ದಂಡಪ್ಪಾಣಿ ಚೆನ್ನೈನ ಖ್ಯಾತ ವರ್ತಕರಾಗಿದ್ದಾರೆ. ಹಲವಾರು ವರ್ಷಗಳಿಂದ ಸಮವಸ್ತ್ರಗಳನ್ನು ಪೂರೈಸುವ ವಹಿವಾಟಿನಲ್ಲಿ ತೊಡಗಿದ್ದಾರೆ. ಪೊಲೀಸ್ ಇಲಾಖೆಗೆ ಅವರು ಇತ್ತೀಚೆಗೆ ಲಕ್ಷಾಂತರ ರೂ. ಮೌಲ್ಯದ ಸಮವಸ್ತ್ರಗಳನ್ನು ವಿತರಿಸಿದ್ದರು. ಇದರಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಮೇಲೆ ಇಂದು ಮುಂಜಾನೆ ಈ ದಾಳಿ ನಡೆದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಬಿಜೆಪಿಯ ನಾಯಕರೂ ಆಗಿರುವ ದಂಡಪ್ಪಾಣಿ ಪ್ರಭಾವಿ ವ್ಯಕ್ತಿಯಾಗಿದ್ದು, ಅವರ ವಹಿವಾಟು ಬಗ್ಗೆ ಪೊಲೀಸ್ ಇಲಾಖೆ ತನಿಖೆ ತೀವ್ರಗೊಳಿಸಿದೆ.

No comments:

Post a Comment

Featured Post

ಪ್ರಿಯಾಂಕ ಗಾಂಧಿಗೆ ಕರ್ನಾಟಕ ಚುನಾವಣಾ ಜವಾಬ್ದಾರಿ...!

ಮುಂದಿನ ವರ್ಷ ಕರ್ನಾಟಕ, ರಾಜಸ್ಥಾನದಲ್ಲಿ ಚುನಾವಣೆ ನಡೆಯಲಿದ್ದು, ಈ ಎರಡು ರಾಜ್ಯಗಳ ಚುನಾವಣೆ ಕಾಂಗ್ರೆಸ್ ಪಕ್ಷಕ್ಕೆ ಮಹತ್ವವಾಗಿದೆ. ಚುನಾವಣೆಯಲ್ಲಿ ಗೆಲುವು ಪಡೆಯುವ ದೃ...