ವಾಷಿಂಗ್ಟನ್
: ಚೀನಾದ ಅಧ್ಯಕ್ಷ ಕ್ಸಿ ಜಿಂಪಿಂಗ್ ಮತ್ತು ಅವರ ಮಹತ್ವಾಕಾಂಕ್ಷೆಯ ಯೋಜನೆಯ ವಿರುದ್ಧ ಮೋದಿ ಮತ್ತು ಅವರ ತಂಡ ಬಹಿರಂಗವಾಗಿ ಮಾತನಾಡಿದೆ ಎಂದು ಅಮೆರಿಕಾ ಕಾಂಗ್ರೆಸ್ಸಿನ ವಿಚಾರಣೆಯ ಸಂದರ್ಭದಲ್ಲಿ, ಪ್ರತಿಷ್ಠಿತ ಟಿಂಕ್ ಟ್ಯಾಂಕ್ ನಿರ್ದೇಶಕ ಮೈಕೆಲ್ ಪಿಲ್ಸ್ಬರಿ ಹೇಳಿದ್ದಾರೆ.
ಚೀನಾದ ಒನ್ ಬೆಲ್ಟ್ ಒನ್ ರೋಡ್ (OBOR) ಯೋಜನೆ ವಿವಾದಿತ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಹಾದು ಹೊಗಿದ್ದು ಚೀನಾದ ಈ ಯೋಜನೆಯನ್ನು ಭಾರತ ಪ್ರಪ್ರಥಮವಾಗಿ ಬಹಿರಂಗವಾಗಿ ತಿರಸ್ಕರಿಸಿದೆ. ಚೀನಾದ ಈ ಮಹತ್ವಾಕಾಂಕ್ಷಿ ಯೋಜನೆ ಸಾಕಾರಗೊಳ್ಳಲು ವಿಶ್ವ ದಲ್ಲೇ ಅತೀ ವೇಗವಾಗಿ ಬೆಳೆಯುತ್ತಿರುವ ಭಾರತದ ಸಹಕಾರ ಅತ್ಯಗತ್ಯವಾಗಿದೆ.
ಚೀನಾದ ಈ ಯೋಜನೆಯನ್ನು ಬಹಿರಂಗವಾಗಿ ತಿರಸ್ಕರಿಸಿದ “ವಿಶ್ವದ ಏಕೈಕ ನಾಯಕ !! ಹೌದು ಅದು ಪ್ರಧಾನಿ ನರೇಂದ್ರ ಮೋದಿ …ಅವರು ಮತ್ತು ಅವರ ತಂಡ ಬಹಿರಂಗವಾಗಿ ಇದರ ಬಗ್ಗೆ ಮಾತನಾಡುತ್ತಿದ್ದಾರೆ . ಭಾಗಶಃ ಏಕೆಂದರೆ ಚೀನಾದ ಬೆಲ್ಟ್ ಮತ್ತು ರೋಡ್ ಯೋಜನೆ ಭಾರತೀಯ ಸಾರ್ವಭೌಮ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಪಿಲ್ಸ್ಬರಿ ಹೇಳಿದರು.
” ಅಮೆರಿಕಾ ಸರಕಾರ, ಈ ಮೊದಲು ಚೀನಾದ ಯೋಜನೆಗೆ ಸಹಕಾರ ನೀಡುವುದಾಗಿ ತಿಳಿಸಿತ್ತು ಆದರೆ ಇದೀಗ ತಟಸ್ಥವಾಗಿದೆ ಎಂದು ಕೂಡ ಅವರು ಹೇಳಿದರು.
ತದನಂತರ ತನ್ನ ಹೊಸ ಇಂಡೋ-ಪೆಸಿಫಿಕ್ ಕಾರ್ಯತಂತ್ರಕ್ಕಾಗಿ ಟ್ರಂಪ್ ಆಡಳಿತವನ್ನು ಶ್ಲಾಘಿಸುತ್ತಾ ಟ್ರಂಪ್ ಆಡಳಿತದ “ಮುಕ್ತ ಮತ್ತು ತೆರೆದ” ಇಂಡೋ-ಪೆಸಿಫಿಕ್ ನೀತಿಯ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
“ಚೀನಾ ಈಗಾಗಲೇ ಭಾರತದ ಮಹತ್ವವನ್ನು ಅರಿತೊಕೊಂಡಿದೆ ಆದರೆ ಅದನ್ನು ಅವರು ಇಷ್ಟಪಡುವುದಿಲ್ಲ ಎಂದು ಚೀನಾ ಸಂಬಂಧಿತ ವಿಷಯಗಳ ತಜ್ಞ ಮತ್ತು ಅಮೆರಿಕಾದ ರಕ್ಷಣಾ ಅಧಿಕಾರಿ ಪಿಲ್ಸ್ಬರಿ ಹೇಳಿದರು.
“ಹಿಂದೂ ಮಹಾಸಾಗರವನ್ನು ಭಾರತ ತನ್ನ ಹತೋಟಿಯಲ್ಲಿ ಇಟ್ಟುಕೊಳ್ಳುವುದು ರಕ್ಷಣಾತ್ಮಕವಾಗಿ ಭಾರತಕ್ಕೆ ಅತ್ಯಗತ್ಯವಾಗಿದ್ದು ಇದಕ್ಕಾಗಿ ಅಮೆರಿಕಾದ ಪಿಎ ಯುದ್ದ ವಿಮಾನವನ್ನು ಹಲವಾರು ಶತಕೋಟಿ ಡಾಲರ್ ವೆಚ್ಚದಲ್ಲಿ ಖರೀದಿಸಿದೆ. ಇದು ಹಿಂದೂ ಮಹಾಸಾಗರ ದಲ್ಲಿ ಪ್ರಸ್ತುತ ಸನ್ನಿವೇಶ ವನ್ನು ಟ್ರ್ಯಾಕ್ ಮಾಡಲು ಭಾರತಕ್ಕೆ ಭಾರಿ ಪ್ರಮಾಣದಲ್ಲಿ ಸಹಾಯವಾಗಲಿದೆ. ” ಎಂದು ಅವರು ಹೇಳಿದರು
” ಭಾರತದೊಂದಿಗಿನ ವ್ಯಾಪಕ ಸಹಕಾರಕ್ಕಾಗಿ ಚೀನಾ ಈ ಮೊದಲು ಒಬಾಮಾ ಸರ್ಕಾರವನ್ನು ಕೂಡ ತಿರಸ್ಕರಿಸಿತ್ತು ಆದರೆ ಭಾರತ ಅತ್ಯಂತ ಪ್ರಭಾವಶಾಲಿ ರಾಷ್ಟ್ರ ವಾಗಿ ಬೆಳೆಯುತ್ತಿರುವುದನ್ನು ಚೀನಾ ಒಪ್ಪಿಕೊಳ್ಳಬೇಕಿದೆ ಎಂದು ಪ್ರಶ್ನೆಯೊಂದಕ್ಕೆ ಅಮೆರಿಕಾದ ವಿಶ್ಲೇಷಕ ಉತ್ತರಿಸಿದರು.
ಚೀನಾ ತನ್ನ ಈ ಮಹತ್ವಾಕಾಂಕ್ಷಿ ಯೋಜನೆಗೆ ನೆರೆ ರಾಷ್ಟ್ರಗಳನ್ನು ಸಹಿ ಹಾಕಿಸುವ ಮೂಲಕ ಏಷ್ಯಾದಲ್ಲಿ ಅನಿಯಂತ್ರಿತ ಪ್ರಮುಖ ಶಕ್ತಿಯಾಗಿ ಹೊರಹೊಮ್ಮುವ ಉದ್ದೇಶ ಮತ್ತು ಒತ್ತಾಸೆಯನ್ನು ಹೊಂದಿದೆ ಇದಕ್ಕೆ ಪ್ರಮುಖ ಕಾರಣ ಚೀನಾದ ಹಲವು ನೆರೆಹೊರೆಯ ರಾಷ್ಟ್ರಗಳು ಸಾಲ ಮರು ಪಾವತಿ ಮಾಡಲು ವಿಫಲವಾಗಿರುವುದು” ಎಂದು ಮೈಕೆಲ್ ಮಾರ್ಕ್ ಅಭಿಪ್ರಾಯ ಪಟ್ಟಿದ್ದಾರೆ.
ಚೀನಾದ ಪರಿಣತಿ ಮತ್ತು ಬಂಡವಾಳದ ವಿಸ್ತಾರವಾದ ಬಾಂಧವ್ಯವನ್ನು ವಿಶ್ವದ ವಿವಿಧ ಭಾಗಗಳಿಗೆ ವಿಸ್ತರಿಸಲು ಬೆಲ್ಟ್ ಮತ್ತು ರೋಡ್ ಯೋಜನೆ ಉದ್ದೇಶಿಸಿದೆ. ಆದರೆ ಪಾಕಿಸ್ತಾನ-ಆಕ್ರಮಿತ-ಕಾಶ್ಮೀರದಲ್ಲಿ (ಪಿಒಕೆ) ಇದು ಹಾದುಹೋಗುವುದರಿಂದ ಭಾರತ ಈ ಯೋಜನೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ.
ಇದಕ್ಕೆ ಪ್ರತಿಯಾಗಿ ಈ ವರ್ಷದ ಮೇ ತಿಂಗಳಲ್ಲಿ ಚೀನಾ ಆಯೋಜಿಸಿದ್ದ ಬೆಲ್ಟ್ ಅಂಡ್ ರೋಡ್ ಫೋರಮ್ (BRF) ಅನ್ನು ಭಾರತ ಬಹಿಷ್ಕರಿಸಿತ್ತು.
ಅಮೇರಿಕಾದ ಕಂಪನಿಗಳು ಆಸ್ತಿ ಕಳ್ಳತನದ (Intellectual Property) ಅಪಾಯವನ್ನು ಎದುರಿಸುತ್ತಿದ್ದು, ಉನ್ನತ ತಂತ್ರಜ್ಞಾನದ ಸಂಶೋಧನೆ ಮತ್ತು ಸೂಕ್ಷ್ಮ ವ್ಯಾಪಾರ ರಹಸ್ಯಗಳನ್ನು ಚೀನಾ ಕದಿಯುತ್ತಿದೆ.
ರಾಜ್ಯ-ಬೆಂಬಲಿತ ಸಂಸ್ಥೆಗಳೊಂದಿಗೆ ಪೈಪೋಟಿ ಮಾಡಲಾಗದ ಚೀನಾ ಇಂತಹ ಕೆಲಸಕ್ಕೆ ಕೈ ಹಾಕಿದೆ ಎಂದು ಅವರು ಆರೋಪಿಸಿದ್ದಾರೆ.
ಕಡಿಮೆ ಬಡ್ಡಿದರದ ನೆಪದಲ್ಲಿ ಸಾಲ ಮರುಪಾವತಿ ಮಾಡಲಾಗದ ದೇಶಕ್ಕೆ ಚೀನಾ ಸಾಲ ನೀಡುತ್ತಿದೆ ಎಂದ ಅವರು ಶ್ರೀಲಂಕಾ ವನ್ನು ಉಲ್ಲೇಖಿಸಿದರು.

No comments:
Post a Comment