ಚೀನಾ ವಿರುದ್ದ ನಿಲ್ಲಬಲ್ಲ ಏಕೈಕ ವಿಶ್ವ ನಾಯಕ ಪ್ರಧಾನಿ ಮೋದಿ ಮಾತ್ರ :ಮೈಕಲ್ ಪಿಲ್ಸ್ಬರ್

ವಾಷಿಂಗ್ಟನ್
: ಚೀನಾದ ಅಧ್ಯಕ್ಷ ಕ್ಸಿ ಜಿಂಪಿಂಗ್ ಮತ್ತು ಅವರ ಮಹತ್ವಾಕಾಂಕ್ಷೆಯ ಯೋಜನೆಯ ವಿರುದ್ಧ ಮೋದಿ ಮತ್ತು ಅವರ ತಂಡ ಬಹಿರಂಗವಾಗಿ ಮಾತನಾಡಿದೆ ಎಂದು ಅಮೆರಿಕಾ ಕಾಂಗ್ರೆಸ್ಸಿನ ವಿಚಾರಣೆಯ ಸಂದರ್ಭದಲ್ಲಿ, ಪ್ರತಿಷ್ಠಿತ ಟಿಂಕ್ ಟ್ಯಾಂಕ್ ನಿರ್ದೇಶಕ ಮೈಕೆಲ್ ಪಿಲ್ಸ್ಬರಿ ಹೇಳಿದ್ದಾರೆ.
ಚೀನಾದ ಒನ್ ಬೆಲ್ಟ್ ಒನ್ ರೋಡ್ (OBOR) ಯೋಜನೆ ವಿವಾದಿತ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಹಾದು ಹೊಗಿದ್ದು ಚೀನಾದ ಈ ಯೋಜನೆಯನ್ನು ಭಾರತ ಪ್ರಪ್ರಥಮವಾಗಿ ಬಹಿರಂಗವಾಗಿ ತಿರಸ್ಕರಿಸಿದೆ. ಚೀನಾದ ಈ ಮಹತ್ವಾಕಾಂಕ್ಷಿ ಯೋಜನೆ ಸಾಕಾರಗೊಳ್ಳಲು ವಿಶ್ವ ದಲ್ಲೇ ಅತೀ ವೇಗ‌ವಾಗಿ ಬೆಳೆಯುತ್ತಿರುವ ಭಾರತದ ಸಹಕಾರ ಅತ್ಯಗತ್ಯವಾಗಿದೆ.
ಚೀನಾದ ಈ ಯೋಜನೆಯನ್ನು ಬಹಿರಂಗವಾಗಿ ತಿರಸ್ಕರಿಸಿದ “ವಿಶ್ವದ ಏಕೈಕ ನಾಯಕ !! ಹೌದು ಅದು ಪ್ರಧಾನಿ ನರೇಂದ್ರ ಮೋದಿ …ಅವರು ಮತ್ತು ಅವರ ತಂಡ ಬಹಿರಂಗವಾಗಿ ಇದರ ಬಗ್ಗೆ ಮಾತನಾಡುತ್ತಿದ್ದಾರೆ ‌‌. ಭಾಗಶಃ ಏಕೆಂದರೆ ಚೀನಾದ ಬೆಲ್ಟ್ ಮತ್ತು ರೋಡ್ ಯೋಜನೆ ಭಾರತೀಯ ಸಾರ್ವಭೌಮ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಪಿಲ್ಸ್ಬರಿ ಹೇಳಿದರು.
” ಅಮೆರಿಕಾ ಸರಕಾರ, ಈ ಮೊದಲು ಚೀನಾದ ಯೋಜನೆಗೆ ಸಹಕಾರ ನೀಡುವುದಾಗಿ ತಿಳಿಸಿತ್ತು ಆದರೆ ಇದೀಗ ತಟಸ್ಥವಾಗಿದೆ ಎಂದು ಕೂಡ ಅವರು ಹೇಳಿದರು.
ತದನಂತರ ‌ತನ್ನ ಹೊಸ ಇಂಡೋ-ಪೆಸಿಫಿಕ್ ಕಾರ್ಯತಂತ್ರಕ್ಕಾಗಿ ಟ್ರಂಪ್ ಆಡಳಿತವನ್ನು ಶ್ಲಾಘಿಸುತ್ತಾ ಟ್ರಂಪ್ ಆಡಳಿತದ “ಮುಕ್ತ ಮತ್ತು ತೆರೆದ” ಇಂಡೋ-ಪೆಸಿಫಿಕ್ ನೀತಿಯ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
“ಚೀನಾ ಈಗಾಗಲೇ ಭಾರತದ ಮಹತ್ವವನ್ನು ಅರಿತೊಕೊಂಡಿದೆ ಆದರೆ ಅದನ್ನು ಅವರು ಇಷ್ಟಪಡುವುದಿಲ್ಲ ಎಂದು ಚೀನಾ ಸಂಬಂಧಿತ ವಿಷಯಗಳ ತಜ್ಞ ಮತ್ತು ಅಮೆರಿಕಾದ ರಕ್ಷಣಾ ಅಧಿಕಾರಿ ಪಿಲ್ಸ್ಬರಿ ಹೇಳಿದರು.
“ಹಿಂದೂ ಮಹಾಸಾಗರವನ್ನು ಭಾರತ ತನ್ನ ಹತೋಟಿಯಲ್ಲಿ ಇಟ್ಟುಕೊಳ್ಳುವುದು ರಕ್ಷಣಾತ್ಮಕವಾಗಿ ಭಾರತಕ್ಕೆ ಅತ್ಯಗತ್ಯವಾಗಿದ್ದು ಇದಕ್ಕಾಗಿ ಅಮೆರಿಕಾದ ಪಿಎ ಯುದ್ದ ವಿಮಾನವನ್ನು ಹಲವಾರು ಶತಕೋಟಿ ಡಾಲರ್ ವೆಚ್ಚದಲ್ಲಿ ಖರೀದಿಸಿದೆ. ಇದು ಹಿಂದೂ ಮಹಾಸಾಗರ ದಲ್ಲಿ ಪ್ರಸ್ತುತ ಸನ್ನಿವೇಶ ವನ್ನು ಟ್ರ್ಯಾಕ್ ಮಾಡಲು ಭಾರತಕ್ಕೆ ಭಾರಿ ಪ್ರಮಾಣದಲ್ಲಿ ಸಹಾಯವಾಗಲಿದೆ. ” ಎಂದು ಅವರು ಹೇಳಿದರು
” ಭಾರತದೊಂದಿಗಿನ ವ್ಯಾಪಕ ಸಹಕಾರಕ್ಕಾಗಿ ಚೀನಾ ಈ ಮೊದಲು ಒಬಾಮಾ ಸರ್ಕಾರವನ್ನು ಕೂಡ ತಿರಸ್ಕರಿಸಿತ್ತು ಆದರೆ ಭಾರತ ಅತ್ಯಂತ ಪ್ರಭಾವಶಾಲಿ ರಾಷ್ಟ್ರ ವಾಗಿ ಬೆಳೆಯುತ್ತಿರುವುದನ್ನು ಚೀನಾ ಒಪ್ಪಿಕೊಳ್ಳಬೇಕಿದೆ ಎಂದು ಪ್ರಶ್ನೆಯೊಂದಕ್ಕೆ ಅಮೆರಿಕಾದ ವಿಶ್ಲೇಷಕ ಉತ್ತರಿಸಿದರು.
ಚೀನಾ ತನ್ನ ಈ ಮಹತ್ವಾಕಾಂಕ್ಷಿ ಯೋಜನೆಗೆ ನೆರೆ ರಾಷ್ಟ್ರಗಳನ್ನು ಸಹಿ ಹಾಕಿಸುವ ಮೂಲಕ ಏಷ್ಯಾದಲ್ಲಿ ಅನಿಯಂತ್ರಿತ ಪ್ರಮುಖ ಶಕ್ತಿಯಾಗಿ ಹೊರಹೊಮ್ಮುವ ಉದ್ದೇಶ ಮತ್ತು ಒತ್ತಾಸೆಯನ್ನು ಹೊಂದಿದೆ ಇದಕ್ಕೆ ಪ್ರಮುಖ ಕಾರಣ ಚೀನಾದ ಹಲವು ನೆರೆಹೊರೆಯ ರಾಷ್ಟ್ರಗಳು ಸಾಲ ಮರು ಪಾವತಿ ಮಾಡಲು ವಿಫಲವಾಗಿರುವುದು” ಎಂದು ಮೈಕೆಲ್ ಮಾರ್ಕ್ ಅಭಿಪ್ರಾಯ ಪಟ್ಟಿದ್ದಾರೆ.
ಚೀನಾದ ಪರಿಣತಿ ಮತ್ತು ಬಂಡವಾಳದ ವಿಸ್ತಾರವಾದ ಬಾಂಧವ್ಯವನ್ನು ವಿಶ್ವದ ವಿವಿಧ ಭಾಗಗಳಿಗೆ ವಿಸ್ತರಿಸಲು ಬೆಲ್ಟ್ ಮತ್ತು ರೋಡ್ ಯೋಜನೆ ಉದ್ದೇಶಿಸಿದೆ. ಆದರೆ ಪಾಕಿಸ್ತಾನ-ಆಕ್ರಮಿತ-ಕಾಶ್ಮೀರದಲ್ಲಿ (ಪಿಒಕೆ) ಇದು ಹಾದುಹೋಗುವುದರಿಂದ ಭಾರತ ಈ ಯೋಜನೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ.
ಇದಕ್ಕೆ ಪ್ರತಿಯಾಗಿ ಈ ವರ್ಷದ ಮೇ ತಿಂಗಳಲ್ಲಿ ಚೀನಾ ಆಯೋಜಿಸಿದ್ದ ಬೆಲ್ಟ್ ಅಂಡ್ ರೋಡ್ ಫೋರಮ್ (BRF) ಅನ್ನು ಭಾರತ ಬಹಿಷ್ಕರಿಸಿತ್ತು.
ಅಮೇರಿಕಾದ ಕಂಪನಿಗಳು ಆಸ್ತಿ ಕಳ್ಳತನದ (Intellectual Property) ಅಪಾಯವನ್ನು ಎದುರಿಸುತ್ತಿದ್ದು, ಉನ್ನತ ತಂತ್ರಜ್ಞಾನದ ಸಂಶೋಧನೆ ಮತ್ತು ಸೂಕ್ಷ್ಮ ವ್ಯಾಪಾರ ರಹಸ್ಯಗಳನ್ನು ಚೀನಾ ಕದಿಯುತ್ತಿದೆ.
ರಾಜ್ಯ-ಬೆಂಬಲಿತ ಸಂಸ್ಥೆಗಳೊಂದಿಗೆ ಪೈಪೋಟಿ ಮಾಡಲಾಗದ ಚೀನಾ ಇಂತಹ ಕೆಲಸಕ್ಕೆ ಕೈ ಹಾಕಿದೆ ಎಂದು ಅವರು ಆರೋಪಿಸಿದ್ದಾರೆ.
ಕಡಿಮೆ ಬಡ್ಡಿದರದ ನೆಪದಲ್ಲಿ ಸಾಲ ಮರುಪಾವತಿ ಮಾಡಲಾಗದ ದೇಶಕ್ಕೆ ಚೀನಾ ಸಾಲ ನೀಡುತ್ತಿದೆ ಎಂದ ಅವರು ಶ್ರೀಲಂಕಾ ವನ್ನು ಉಲ್ಲೇಖಿಸಿದರು.

ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರ ಕಾಯ್ದೆಯ ಪ್ರಮುಖ ಅಂಶಗಳು.

1) ಖಾಸಗಿ ಆಸ್ಪತ್ರೆಗಳಲ್ಲಿ ದೊರಕುವ ಚಿಕಿತ್ಸೆಗೆ ಬೇಕಾಬಿಟ್ಟಿ ದರ ವಿದಿಸಿ ಬಡವ ಶ್ರೀಮಂತರೆನ್ನದೆ ಹಣ ಕೀಳುವ ಆಸ್ಪತ್ರೆಗಳು ಇನ್ನ ಮುಂದೆ ಯಾವ ಚಿಕಿತ್ಸಗೆ ಯಾವ ದರ ಅಂತ ಸರ್ಕಾರ ನಿಗದಿಪಡಿಸಿದ ದರ ಆಸ್ಪತ್ರೆಗಳ ರಿಸೆಪಷನ್ ಹಾಲ್ನಲ್ಲಿ ಹಾಕಬೇಕು.


2) ಯಲ್ಲಾ ಖಾಸಗಿ ಆಸ್ಪತ್ರೆಗಳು ಸರ್ಕಾರ ನಿಗದಿಪಡಿಸಿದ ಏಕ ರೂಪದ ಚಿಕಿತ್ಸ ದರ ಅನುಸರಿಸಬೇಕು.
3) ರೋಗಿಗೆ ತಾನು ಪಡೆಯಲು ಬಯಸುವ ಚಿಕಿತ್ಸೆಯ ಸಂಪೂರ್ಣ ಚಿಕಿತ್ಸೆಯ ಮುನ್ನ ಬೆಡ್ ಚಾರ್ಜ್,ಚಿಕಿತ್ಸೆಯ ವೆಚ್ಚ ಹಾಗು ಔಷದಿಯ ವೆಚ್ಚದ ಎಸ್ಟಿಮೇಟ್ ಕಾಪೀ ನೀಡಬೇಕು.
4) ಎಮರ್ಜೆನ್ಸಿ ವೇಳೆ ಹಣ ಪಾವತಿಗೆ ಒತ್ತಾಯಿಸುವಂತಿಲ್ಲ.
5)
ವೈದ್ಯರು ಇನ್ನ ಮುಂದೆ ರೋಗಿಗೆ ಬರೆಯುವ ಔಷದಿಗಳ ಹೆಸರನ್ನು ಹಾಗು ಚಿಕಿತ್ಸೆ ಕೊಡುತ್ತಿರುವ ವಿಷಯದ ಕುರಿತು ರೋಗಿಗೆ ಅರ್ಥವಾಗುವ ಹಾಗೆ ಬರೆಯಬೇಕು.
6)
ರೋಗಿಯು ಚಿಕಿತ್ಸೆ ಫಲಕಾರಿಯಾಗದೆ ಮರಣಹೊಂದಿದ ಸಂದರ್ಭದಲ್ಲಿ ಬಿಲ್ ಪಾವತಿಗಾಗಿ ಸಂಭದಿಕರಿಗೆ ಹಿಂಸಿಸಬಾರದು ಹಾಗು ಬಿಲ್ ಪಾವತಿಯಾಗದೆ ಶವ ಕೊಡದೆ ನಿರಾಕರಿಸುವಂತಿಲ್ಲ.
7) ರೋಗಿಯ ಖಾಸಗಿತನ ಕಾಪಡಾಬೇಕು .
8)
ವೈದ್ಯರು ಯಾವ ನಿರ್ದಾರಕ್ಕು ಮುನ್ನ ರೋಗಿಯ ಸಂಬಂದಿಕರ ಒಪ್ಪಿಗೆ ಪಡೆಯಬೇಕು.
9) ಇನ್ನ ಮುಂದೆ ಪ್ರಾರಂಭವಾಗುವ ಖಾಸಗಿ ಲ್ಯಾಬ್ ಗಳು ಸರ್ಕಾರಿ ಆಸ್ಪತ್ರೆಯಿಂದ 200 ಮಿಟರ್ ದೂರದಲ್ಲಿ ಇರಬೇಕು.


ಖಾಸಗಿ ಆಸ್ಪತ್ರೆಗಳು ಬಡವ ಶ್ರೀಮಂತರೆನ್ನದೆ ರೋಗಿಗಳಿಂದ ಹಣ ಕೀಳವ ದಂಧೆ ನೆಡೆಸುತ್ತಿರುವ ಈ ಸಂದರ್ಭದಲ್ಲಿ ಅವರ ಹೆಡೆಮುರಿ ಕಟ್ಟಲು ನಮ್ಮ ಜನ ಪರ ಆರೊಗ್ಯ ಮಂತ್ರಿಗಳಾದ ರಮೇಶ್ ಕುಮಾರ ರವರು ತರಲು ಹೊರಟಿರುವ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರ ಕಾಯ್ದೆ ಯನ್ನು ನಾನು ಬೆಂಬಲಿಸುತ್ತೆನೆ ಹಾಗು ರಾಜ್ಯದ ಯಲ್ಲ ವರ್ಗದ ಜನರು ಈ ಆಸ್ಪತ್ರೆಗಳ ತೊಂದರೆಗೆ ಒಳಾಗಾಗಿದ್ದು

ಒಬ್ಬ ಸಂಸದರಿಗಿದ್ದಾಗಲೂ ಸಹ ಇವತ್ತಿಗಿದ್ದಾಗಲೂ ‘ಸಮಾಜ’ ಎಂಬುವುದಕ್ಕಾಗಿ ದುಡಿಯುತ್ತಿರುವಾಗ ಎಲ್ಲವನ್ನೂ ನಿಭಾಯಿಸುವುದು ಸುಲಭವಲ್ಲ!

ಇನ್ನೂ ಅಚ್ಚರಿಯೆಂದರೆ, ಕಳೆದ ಚುನಾವಣೆಯ 19 ಲಕ್ಷ ಸಾಲ ಇನ್ನೂ ಹಾಗೇ ಇದೆ! ಕ್ರೆಡಿಟ್ ಕಾರ್ಡಿನದು 2,90,000 ರೂ ಹಾಗೇ ಇದೆ! ಸಂಸದರ ಅನುದಾನ ವರ್ಷಕ್ಕೆ ಕೇವಲ 5 ಕೋಟಿಯಾದರೂ ಸಹ, ಒಂದೂ ರೂಪಾಯಿಗಳನ್ನೂ ಸ್ವಂತಕ್ಕೋಸ್ಕರ ಖರ್ಚು ಮಾಡಿಲ್ಲ ಪ್ರತಾಪ್ ಸಿಂಹ ಎಂದರೆ ನಿಜಕ್ಕೂ ಹೆಮ್ಮೆಯೆನಿಸುತ್ತದೆ!ಮನೆಗೆ ಬಂದು ಹೋಗುವವರಿಂದ ಹಿಡಿದು ಸಹಾಯ ಹಸ್ತ ಯಾಚಿಸಿ ಬರುವ ಪ್ರತಿಯೊಬ್ಬರಿಗೂ ಪ್ರತಾಪ್ ಸಿಂಹರಿಂದ ‘ಇಲ್ಲ’ ಎಂಬ ಉತ್ತರ ಬರುವುದಿಲ್ಲ! ನೀವೇಯೋಚಿಸಿ

ಇಷ್ಟಕ್ಕೂ ಪ್ರತಾಪ್ ಸಿಂಹರವರು ಸಂಸದರಾದ ಮೇಲೆ ಮೈಸೂರಿಗೆ ಮಾಡಿದ್ದೇನು ಗೊತ್ತೇ?!ಪ್ರತಾಪ್ ಸಿಂಹ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸುವ ಹಿಂದಿನ ದಿನವಷ್ಟೇ ಒಬ್ಬ ರೈತ ತಂಬಾಕು ಲೈಸೆನ್ಸ್ ನನ್ನು ನವೀಕರಣ ಮಾಡಿಕೊಡಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಾಗ, ನಿರ್ದಿಷ್ಟ ಪ್ರಮಾಣದ ತಂಬಾಕನ್ನು ಬೆಳೆದಿಲ್ಲದ ಕಾರಣಕ್ಕೆ ಹುಣಸೂರು, ಪಿರಿಯಾಪಟ್ಟಣ, ಹೆಚ್ ಡಿ ಕೋಟೆಯ ಸುಮಾರು ನಾಲ್ಕು ಸಾವಿರ ಕ್ಕೂ ಹೆಚ್ಚು ಲೈಸೆನ್ಸ್ ಗಳನ್ನು ನವೀಕರಣ ಮಾಡದಿರುವುದು ಗೊತ್ತಾದಾಗ, ಕೇಂದ್ರ ವಾಣಿಜ್ಯ ಸಚಿವೆಯಾಗಿದ್ದ

ನಿರ್ಮಲಾ ಸೀತಾರಾಮನ್ ಹಾಗು ತಂಬಾಕು ಮಂಡಳಿಯ ಅಧ್ಯಕ್ಷರ ಜೊತೆ ಚರ್ಚಿಸಿ ಒಂದೇ ದಿನದಲ್ಲಿ ಪ್ರತಿ ರೈತರ ಲೈಸೆನ್ಸ್ ಗಳನ್ನೂ ನವೀಕರಿಸುವುದಕ್ಕೆ ಅವಕಾಶ ಮಾಡಿಕೊಟ್ಟದ್ದು ಇದೇ ಪ್ರತಾಪ್ ಸಿಂಹ!ಲೈಸೆನ್ಸ್ ನವೀಕರಣ ಮಾಡಿಕೊಟ್ಟಾಗ ರಸಗೊಬ್ಬರದ ಅನಿವಾರ್ಯ ಹೆಚ್ಚಾಯಿತು! ಕೊನೆಗೆ, ಕೇಂದ್ರ ರಸಗೊಬ್ಬರ ಸಚಿವರಾದ ಶ್ರೀ ಅನಂತ ಕುಮಾರ್ ಹೆಗಡೆಯವರ ಜೊತೆ ಚರ್ಚಿಸಿ 2,850 ಟನ್ ಹೆಚ್ಚುವರಿ ಗೊಬ್ಬರ ಪೂರೈಕೆ ಮಾಡಿಸಿದ್ದು ಇದೇ ಸಿಂಹ!: ಪ್ರತಾಪ್ ಸಿಂಹ ಸಂಸದರಾದ ನಂತರ ಕಾಫಿ ಬೆಳೆಗಾರರಿಗೆ 12 ನೇ ಪಂಚವಾರ್ಷಿಕ ಯೋಜನೆಯಲ್ಲಿ ಕಾಫಿ ಬೆಳೆಗಾರರಿಗೆ 950 ಕೋಟಿ ರೂಗಳ ಪ್ಯಾಕೇಜ್ ಘೋಷಣೆಯಾಯಿತು! ತದನಂತರವೇ, ಕಾಫಿ ಬೆಳೆ ಮೈಸೂರು ವಿಭಾಗದಲ್ಲಿ ಅಭಿವೃದ್ದಿಯಾಯಿತು ರಸ್ತೆ ಕಾಮಗಾರಿ ಹಾಗೂ ನವೀಕರಣದಲ್ಲಿ ಮೈಸೂರು ಕಂಡಷ್ಟು ಅಭಿವೃದ್ದಿ ಸ್ವತಃ ಬೆಂಗಳೂರು ಸಹ ಕಂಡಿಲ್ಲ!


ಬೆಂಗಳೂರು, ಮೈಸೂರು ಮತ್ತು ದಕ್ಷಿಣ ಕನ್ನಡದ ಬಂಟ್ವಾಳವನ್ನು ಜೋಡಿಸುವ ರಾಷ್ಟ್ರೀಯ ಹೆದ್ದಾರಿ 275 ಪುತ್ತೂರು, ಸುಳ್ಯ, ಮಡಿಕೇರಿ, ಪಿರಿಯಾಪಟ್ಟಣ, ಮೈಸೂರು, ಶ್ರೀರಂಗಪಟ್ಟಣ, ಮಂಡ್ಯ, ರಾಮನಗರಗಳನ್ನು ಜೋಡಿಸುತ್ತದೆ. ಮೈಸೂರು ನಗರದ ಹೊರವಲಯದಲ್ಲಿ ಹಾದುಹೋಗುವ ಈ ಹೆದ್ದಾರಿ, ಹಿನಕಲ್ ಜಂಕ್ಷನ್ ನಿಂದ ಇಲವಾಲ ಆರ್‍ಎಂಪಿ ಕ್ವಾಟ್ರಸ್ ವರೆಗಿನ 12 ಕಿ.ಮೀ ರಸ್ತೆಯ ನವೀಕರಣ ಕಾಮಗಾರಿ ರೂ. 8 ಕೋಟಿ ವೆಚ್ಚದಲ್ಲಿ 2015 ರಲ್ಲಿ


ಚಾಲನೆಗೊಂಡಿದೆ. ಕಾಮಗಾರಿ ಆರಂಭವಾದ ಮೂರು ತಿಂಗಳೊಳಗೆ ಕಾಮಗಾರಿ ಮುಗಿಸಲು ಗಡುವು ನೀಡಲಾಗಿತ್ತು.: ಅದಲ್ಲದೇ, 2016 – 2017 ರ ಸಾಲಿನ ಕೇಂದ್ರ ರಸ್ತೆ ಅನುದಾನದಡಿ ಮೈಸೂರು ಜಿಲ್ಲೆಗೆ 282 ಕೋಟಿ ಅನುದಾನ ಹಾಗೂ ಕೊಡಗು ಜಿಲ್ಲೆಗೆ 28 ಕೋಟಿ ರೂ ಗಳ ಅನುದಾನವನ್ನು ಬಿಡುಗಡೆ ಮಾಡಿದೆ! ಕಾಮಗಾರಿ ಪ್ರಗತಿಯಲ್ಲಿದ್ದರೂ ಸಹ ಸ್ವತಃ ಪ್ರತಾಪ್ ಸಿಂಹರವರೇ ಕೆಲಸದ ಪ್ರತಿ ವಿವರಗಳನ್ನೂ ತೆಗೆದುಕೊಳ್ಳುತ್ತಾರೆ.


ಮೊದಲ ಬಜೆಟ್ ನಲ್ಲಿಯೇ ಮೈಸೂರಿಗೆ ಟೆಕ್ಸ್ಟ್ ಟೈಲ್ ಕ್ಲಸ್ಟರ್ ಸ್ಥಾಪನೆಗೆ ಅನುಮೋದನೆ ನೀಡಿದ್ದು, ಕೇಂದ್ರ ವಿತ್ತ ಸಚಿವರಾದ ಅರುಣ್ ಜೇಟ್ಲಿ 200 ಕೋಟಿ ರೂ ಅನುದಾನ ನೀಡಿದ್ದಾರೆ ಮೈಸೂರಿನಲ್ಲಿ ಪೋಸ್ಟ್ ಆಫೀಸ್ ಪಾಸ್ ಪೋರ್ಟ್ ಸೇವಾ ಕೇಂದ್ರ ಸ್ಥಾಪನೆಯಾಗಿದ್ದು ಕೂಡ ಪ್ರತಾಪ್ ಸಿಂಹರವರ ಒತ್ತಾಸೆಯಿಂದಲೇ! ನೆನಪಿರಲಿ, ಮೈಸೂರಿನ ಕಡೆಯವರೇ ಆದ ಎಸ್ ಎಮ್ ಕೃಷ್ಣ ರವರು ಈ ಹಿಂದೆ ವಿದೇಶಾಂಗ ಸಚಿವರಾಗಿದ್ದಾಗಲೂ ಈ ಕೆಲಸವಾಗಿರಲಿಲ್ಲ!


137 ಕೋಟಿ ರೂ ವೆಚ್ಚದಲ್ಲಿ ಮೈಸೂರಿನ ಅಖಿಲ ಭಾರತ ಶ್ರವಣ ಹಾಗೂ ವಾಕ್ ಸಂಸ್ಥೆಯ ಸಂಶೋಧನಾ ಕೇಂದ್ರಕ್ಕೆ ಎರಡು ವರ್ಷಗಳ ಹಿಂದಷ್ಟೇ ಶಂಕು ಸ್ಥಾಪನೆಯಾಗಿದೆ! ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕುಶಾಲನಗರ–ಮಡಿಕೇರಿ ಮಾರ್ಗದ ಸರ್ವೇ ಕಾರ್ಯ ತ್ವರಿತಗತಿಯಲ್ಲಿ ನಡೆಯಲು ಕೇಂದ್ರಕ್ಕೆ ಒತ್ತಡ ತಂದ ಮೇಲೆ ಕೇಂದ್ರ ಸರಕಾರ ತಕ್ಷಣವೇ ಸರ್ವೇ ಮಾಡಲು ಭರವಸೆ ನೀಡಿತು.ರೈಲ್ವೇ ಕ್ಷೇತ್ರದಲ್ಲಿ ಪ್ರತಾಪ್ ಸಿಂಹರವರ ಸಾಧನೆ ಅದ್ವಿತೀಯ!


ಹಳೇ ಮೈಸೂರು ಭಾಗದಿಂದ ಮೈಸೂರು – ವಾರಣಾಸಿ ರೈಲು ಸಂಚಾರವನ್ನು ವಾರಕ್ಕೆ ಎರಡು ದಿನ ಸಂಚರಿಸುವ ಹೊಸ ರೈಲನ್ನು ಮಂಜೂರು ಮಾಡಿದ್ದರಿಂದ ದಕ್ಷಿಣ ಕರ್ನಾಟಕದ ತೀರ್ಥಯಾತ್ರಿಗಳಿಗೆ ಅನುಕೂಲವಾಗುವಂತಾಗಿದ್ದು ಇದೇ ಪ್ರತಾಪ್ ಸಿಂಹರಿಂದ!ಮೈಸೂರು –ಹೌರಾ ಹೈಸ್ಪೀಡ್ ರೈಲನ್ನು ವಾರದಲ್ಲಿ ಎರಡು ಬಾರಿ ರೈಲು ಸಂಚರಿಸುವಂತೆ ಒತ್ತಡ ತಂದಿದ್ದು ಇದೇ ಸಿಂಹ!ಮೈಸೂರು ರೈಲ್ವೇ ನಿಲ್ದಾಣದ ಎರಡನೆಯ ಪ್ರವೇಶ ದ್ವಾರದ ಪಾರ್ಕಿಂಗ್ ಜಾಗದ ಅಗಲೀಕರಣ ರೂ. 18.44 ಲಕ್ಷದಲ್ಲಿ, ಇ-ಶೌಚಾಲಯಗಳ ನಿರ್ಮಾಣ, ಮಹಿಳಾ ಶೌಚಾಲಯಗಳ ನಿರ್ಮಾಣ ಮತ್ತು ಸ್ಯಾನಿಟರಿ ನ್ಯಾಪ್‍ಕಿನ್ ಯಂತ್ರಗಳ ಅಳವಡಿಕೆ ರೂ. 15.00 ಲಕ್ಷ ವೆಚ್ಚದಲ್ಲಿ, ಪ್ರಯಾಣಿಕರ ಮೂಲಭೂತ ಸೌಲಭ್ಯಗಳಿಗೆ ರೂ. 7.00 ಲಕ್ಷ ವೆಚ್ಚ.ಮಾಡಿದಪ್ರತಾಪ್ ಸಿಂಹ ಮೈಸೂರಿನ ದಿಕ್ಕನ್ನೇ ಬದಲಿಸಿದ್ದು ಸುಳ್ಳಲ್ಲ.ರೂ. 3.11 ಲಕ್ಷ ವೆಚ್ಚದಲ್ಲಿ ಎಂಎಫ್‍ಸಿ ಕಟ್ಟಡ ಆವರಣದಲ್ಲಿ ಉದ್ಯಾನವನ ನಿರ್ಮಾಣವಾಯಿತು! ಚಾಮರಾಜಪುರಂ ರೈಲ್ವೇ ನಿಲ್ದಾಣದಲ್ಲಿ ರೂ. 37.40 ಲಕ್ಷ ವೆಚ್ಚದಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸಲು ವಿಶಾಲ ಮತ್ತು ಸುಸಜ್ಜಿತ ತಂಗುದಾಣವನ್ನುನಿರ್ಮಿಸಿದರು! ಒಟ್ಟು 80.95 ರೂ. ಲಕ್ಷ ವೆಚ್ಚದಲ್ಲಿ ರೈಲ್ವೇ ನಿಲ್ದಾಣ ಮೂಲ ಸೌಲಭ್ಯ ಮೇಲ್ದರ್ಜೆಗೇರಿಸಲು ಕ್ರಮ ತೆಗೆದುಕೊಂಡಪ್ರತಾಪ್ ಸಿಂಹ ಯುರೋಪ್ ರೈಲ್ವೇ ನಿಲ್ದಾಣಗಳ ರೀತಿಯನ್ನು ಅಳವಡಿಸಲು, ಮೈಸೂರು ನಗರದ ಮುಖ್ಯ ರೈಲ್ವೆ ನಿಲ್ದಾಣ ಹಾಗೂ ಚಾಮರಾಜಪುರಂ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಮೂಲಭೂತ ಸೌಕರ್ಯ ಕಲ್ಪಿಸಲು ರೂ. 8.94 ಲಕ್ಷಗಳನ್ನು ಮಂಜೂರು ಮಾಡಿದ್ದು ಇದೇ ಪ್ರತಾಪ್ ಸಿಂಹ!


ಕಾಫಿ, ಕರಿಮೆಣಸು ಹಾಗು ಸಾಂಬಾರು ಪದಾರ್ಥಗಳ ಬೆಳೆಗೆ ಹೆಚ್ಚಿನ ಒತ್ತು ನೀಡುತ್ತಿರುವ ಪ್ರತಾಪ್ ಸಿಂಹರಿಗೆ ಮೈಸೂರನ್ನು ಯಾವ ರೀತಿಯಾಗಿ ಅಭಿವೃದ್ಧಿಗೊಳಿಸಬೇಕೆಂಬ ಸ್ಪಷ್ಟ ಚಿತ್ರಣವಿದೆ! ಕರ್ನಾಟಕದಲ್ಲಿಯೇ ಕೇಂದ್ರ ಸರಕಾರದ ಅನುದಾನಗಳನ್ನು ಸಮರ್ಥವಾಗಿ ಬಳಕೆ ಮಾಡಿಕೊಂಡ ಎರಡನೇ ಸಂಸದ ಪ್ರತಾಪ್ ಸಿಂಹ!
ಮೊನ್ನೆಯಷ್ಟೇ ಮೈಸೂರಿನಲ್ಲಿ ಡಿಸಿ ಕಚೇರಿ ನಿರ್ಮಾಣಕ್ಕಾಗಿ 15 ಎಕರೆ ಜಾಗ ಮಂಜೂರು ಮಾಡಿದ್ದಾರೆ!

ಇದಲ್ಲದೇ, ಮೈಸೂರಿನ ಮುಖ್ಯ ನಿಲ್ದಾಣದಲ್ಲಿ ಅಂಧರಿಗೆ ಅನುಕೂಲಾವಗುವ ಹಾಗೆ ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ‘ಬ್ರೈಲ್ ಲಿಪಿಯಿರುವ ಸೂಚನಾ ಫಲಕಗಳನ್ನು’ ಅಳವಡಿಸಲಾಗಿದೆ!ಮೈಸೂರಿನಲ್ಲೊಂದರಲ್ಲಿಯೇ ಪ್ರಧಾನಿಯ ಜನೌಷಧ ಭಾರತೀಯ ಕೇಂದ್ರ ಒಟ್ಟಾರೆಯಾಗಿ 17 ಇವೆ! ಬೆಂಗಳೂರಿನಲ್ಲಿಯೂ ಸಹ ಇಷ್ಟು ದೊಡ್ಡ ಮತ್ತದಲ್ಲಿ ಕೇಂದ್ರಗಳಿಲ್ಲ.


: PM Reliefe fund ನ್ನು ಅತೀ ಹೆಚ್ಚಾಗಿ ಸಮರ್ಥವಾಗಿ ಬಳಸಿಕೊಂಡು, ಹಿಂದುಳಿದ ವರ್ಗಗಳ ಮಾರಣಾಂತಿಕ ಖಾಯಿಲೆಗೆ ಒಳಗಾಗಿರುವ ವೃದ್ಧರಿಗೆ ಸಮರ್ಥವಾಗಿ ವೈದ್ಯಕೀಯ ಸೇವೆಯನ್ನು ನೀಡಿದ ಸಂಸದ ಪ್ರತಾಪ್ ಸಿಂಹ!: ಕೆ.ಆರ್. ಆಸ್ಪತ್ರೆಯಲ್ಲಿ ಅಗತ್ಯವಿದ್ದ 1 ಕೋಟಿ 20 ಲಕ್ಷ ಮೊತ್ತದ ಯಂತ್ರೋಪಕರಣದ ಸೌಲಭ್ಯವನ್ನು ಒದಗಿಸಿಕೊಟ್ಟಿದ್ದು ಇದೇ ಪ್ರತಾಪ್ ಸಿಂಹ!!: 


ಸಂಸದರ ಅನುದಾನದಲ್ಲಿ ರೈಲ್ವೇ ನಿಲ್ದಾಣದಲ್ಲಿ ಬಾಡಿಗೆ ವಾಹನಗಳನ್ನು, ಕುಳಿತುಕೊಳ್ಳುವ ಆರಾಮ ಕುರ್ಚಿಗಳನ್ನು ಸಂಸದ ಪ್ರತಾಪ್ ಸಿಂಹ ನೀಡಿದ‌್ದಾರೆ!ಮೈಸೂರು ನಗರಕ್ಕೆ ಹೆಸರು ತಂದುಕೊಟ್ಟಿದ್ದೇ ವಿಶ್ವಮಾನವ ಎಕ್ಸ್ ಪ್ರೆಸ್ ಎಂದರೆ ಅತಿಶಯೋಕ್ತಿಯಲ್ಲ! ಮೈಸೂರಿನಲ್ಲಿ ಇವತ್ತಿನ ತನಕ ಯಾವ ಸಂಸದರಿಗೂ ಕೂಡ ಇಂತಹ ದೊಡ್ಡ ಮಟ್ಟದ ಯೋಜನೆಯನ್ನು ತರಲು ಸಾಧ್ಯವಾಗಿಲ್ಲ!ಚಾಮುಂಡಿ ಬೆಟ್ಟದಲ್ಲಿ ‘Water Plants’ನನ್ನು ನಿರ್ಮಿಸಿದ್ದು ಕೂಡ ಪ್ರತಾಪ್ ಸಿಂಹರ ಸಾಮಾಜಿಕ ಕಳಕಳಿ ಎಷ್ಟಿದೆಯೆಂಬುದಕ್ಕೊಂದು ಜೀವಂತ ನಿದರ್ಶನ!


: ಇದು ತೀರಾ ಮುಖ್ಯವಾದ ಸಾಧನೆಗಳಷ್ಟೇ! ಚಿಕ್ಕಪುಟ್ಟ ಕೆಲಸ ಕಾರ್ಯಗಳನ್ನೂ ಅಚ್ಚುಕಟ್ಟಾಗಿ ನಿರ್ವಹಿಸುವ ಪ್ರತಾಪ್ ಸಿಂಹ ಎಂಬ ಮೈಸೂರಿನ ನಾಯಕರೊಬ್ಬರು ಇದೆಲ್ಲಕ್ಕಿಂತ ಹೊರತು ಪಡಿಸಿ ಒಬ್ಬ ಸ್ವಾಭಿಮಾನಿ ಹಿಂದೂ! ಸತ್ಯ!! ಹಿಂದುತ್ವದ ಅಡಿಯಲ್ಲಿಯೇ ರಾಜಕೀಯಕ್ಕೆ ಕಾಲಿಟ್ಟ ಪ್ರತಾಪ್ ಸಿಂಹ ಇವತ್ತಿಗೂ ಮತಕ್ಕೋಸ್ಕರ ತುಷ್ಟೀಕರಣಕ್ಕೆ ನಿಂತವರಲ್ಲ! “ನನ್ನ ಕೆಲಸ ನೋಡಿ ಮತ ನೀಡಿ’ ಎನ್ನುವ ಪ್ರತಾಪ್ ಸಿಂಹ ಇವತ್ತಿಗೂ ಮೈಸೂರಿನ ಸಿಂಹನಾಗಿಯೇ ಉಳಿದಿದ್ದಾರೆ!


ಇದನ್ನೆಲ್ಲ ಬಿಡಿ, ಹೇಳಲೇಬೇಕೆಂದರೆ ಸಂಸದರಾಗಿಯೂ ಕೂಡ, ಒಬ್ಬ ಸಾಮಾನ್ಯರ ಹಾಗೆ ಇವತ್ತಿಗೂ ತೀರಾ ಸರಳವಾಗಿ ಜೀನ್ಸು ಟೀ ಶರ್ಟ್ ತೊಟ್ಟು ಸಾಮಾನ್ಯನಲ್ಲಿ ಸಾಮಾನ್ಯರ ಹಾಗಿದ್ದು ಬಿಡುವ ಪ್ರತಾಪ್ ಸಿಂಹ ಅಡಿಗಡಿಗೂ ಅಚ್ಚರಿಯೇ ಇವತ್ತಿನ ಯಾವ ಸಂಸದರೊಬ್ಬರು ವೈಯುಕ್ತಿಕ ಸಮಸ್ಯೆಗಳನ್ನೂ ಬದಿಗಿರಿಸಿ, ಕೇವಲ ಸಮಾಜಕ್ಕಷ್ಟೇ ಬದುಕಬಲ್ಲರು?! ಎಲ್ಲೋ, ಕೋಟಿಗೆ ಸಿಗುವ ಇಂತಹ ನಾಯಕರಷ್ಟೇ! ಹೇಳ ಹೋದರೆ., ರಾಜಧಾನಿ ಬೆಂಗಳೂರಿಗಿಂತ ಇವತ್ತು ಮೈಸೂರು ಮುಂದುವರೆಯುತ್ತಲಿದೆ! ಕಾರಣ ಅವರೊಬ್ಬರೇ! ಪ್ರತಾಪ್ ಸಿಂಹ!!ಬಹುಷಃ ಒಬ್ಬ ಸಂಸದರಾಗಿ ಇಷ್ಟು ಮಟ್ಟದ ಸಾಧನೆಗಳನ್ನು ಮಾಡಿದಂತಹ ಪ್ರತಾಪ್ ಸಿಂಹರವರು ಭವಿಷ್ಯದಲ್ಲಿ ದೇಶದ ರಾಜಕೀಯ ನಾಯಕರಾಗಿ ಗುರುತಿಸಿಕೊಂಡರೂ ಅಚ್ಚರಿಯೇನಿಲ್ಲ! ಮೋದಿಯ ಅಪ್ಪಟ ಅಭಿಮಾನಿಯಾಗಿರುವ ಪ್ರತಾಪ್ ಸಿಂಹ ಎಂಬಂತಹ ನಿಜವಾದ ‘ಯೂತ್ ಐಕಾನ್’ ನಿಜಕ್ಕೂ ಒಂದು ಅಚ್ಚರಿಯೇ ಬಿಡಿ!


ಕೊನೆಯದಾಗಿ, ನನ್ನ ಪ್ರಕಾರ ಹೇಳಿಬಿಡುತ್ತೇನೆ! ಇಂತಹ ಸರಳ ಪ್ರಾಮಾಣಿಕ ರಾಜಕಾರಣಿ, ಮುತ್ಸದ್ದಿ ಹಾಗೂ ಅಪ್ಪಟ ಸಿದ್ಧಾಂತವಾದಿ, ಬಹುಷಃ ಸಿಗುವುದುಸುಲಭವಲ್ಲ!!

ಗಲ್ಫ್ ರಾಷ್ಟ್ರದ ಭೂಭಾಗಕ್ಕೆ ತಾನೇ ರಾಜನೆಂದು ಘೋಷಿಸಿಕೊಂಡ ಭಾರತೀಯ.

 ಈಜಿಪ್ಟ್:
 ಘೋಷಿಸಿಕೊಂಡಿದ್ದಾನೆ. ಅದೊಂದು ಮರಳುಗಾಡು ಪ್ರದೇಶ. ಈಜಿಪ್ಟ್ ಹಾಗೂ ಸುಡಾನ್‌ ದೇಶಗಳ ಗಡಿಯಲ್ಲಿದೆ
ಈ ಕುರಿತಂತೆ ತಾನು ಆ ಪ್ರದೇಶದ ಪ್ರಧಾನಿಯೆಂದು ಆ ಪ್ರದೇಶಕ್ಕೆ ದೇಶದ ಮಾನ್ಯತೆ ನೀಡಬೇಕೆಂದು ವಿಶ್ವಸಂಸ್ಥೆಗೆ ಮನವಿ ಸಲ್ಲಿಸಿದ್ದಾನೆ. ಆ ಪ್ರದೇಶದ ಹೆಸರು ಕಿಂಗ್‌ಡಮ್‌ ಆಫ್ ದೀಕ್ಷಿತ್‌ (ಕೆಒಡಿ)! ಹಾಗೂ ಆ ಪ್ರದೇಶಕ್ಕೆ ತನ್ನ ತಂದೆ ಅಧ್ಯಕ್ಷರೆಂದೂ ಘೋಷಿಸಿದ್ದಾನೆ.
ಆ ಪ್ರದೇಶ ಯಾವುದೇ ದೇಶಕ್ಕೂ ಸೇರಿಲ್ಲವಾಗಿದ್ದರಿಂದ ಸುಯಶ್‌ ದೀಕ್ಷಿತ್‌ ಆ ಪ್ರದೇಶವನ್ನು ತನ್ನ ದೇಶ ಮತ್ತು ಆ ಪ್ರದೇಶಕ್ಕೆ ತಾನೇ ಪ್ರಧಾನಿ ಅಂತ ಘೋಷಿಸಿ ಕೊಂಡಿದ್ದಾನೆ.1899ರಲ್ಲಿ ಸುಡಾನ್‌-ಈಜಿಪ್ಟ್ ಗಡಿ ಗುರುತಿಸಿದ್ದ ಬ್ರಿಟಿಷರು ಪ್ರಮಾದವಶಾತ್‌ ಆಗಿ ಈ ಜಾಗ ಯಾವ ದೇಶಕ್ಕೂ ಸೇರಿಸದೇ ಬಿಟ್ಟುಬಿಟ್ಟರು. ಹೀಗಾಗಿ ಅದನ್ನು ಈಗ ಸುಯಶ್‌ ದೀಕ್ಷಿತ್‌ ತನ್ನ ದೇಶವೆಂದು ಘೋಷಿಸಿ ವಿಶ್ವಸಂಸ್ಥೆಗೆ ಮನವಿ ಸಲ್ಲಿಸಿದ್ದಾನೆ.

ಭಾರತೀಯ ರಾಜಕಾರಣದ ಬಹು ಜನಪ್ರಿಯ ನಾಯಕ,ನರೇಂದ್ರ ಮೋದಿ:ಅಮೆರಿಕ ಸಮೀಕ್ಷೆ

ವಾಷಿಂಗ್ಟನ್: ನ.16-ಭಾರತೀಯ ರಾಜಕೀಯ ರಂಗದಲ್ಲಿ ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಅತ್ಯಂತ ಜನಪ್ರಿಯ ನಾಯಕಾಗಿದ್ದಾರೆ ಎಂದು ಅಮೆರಿಕದ ಸಮೀಕ್ಷೆಯೊಂದು ತಿಳಿಸಿದೆ. ಅಮೆರಿಕದ ಪಿವ್ಯೂ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಮೋದಿ 88ರಷ್ಟು ಜನಪ್ರಿಯತೆ ಪಡೆದಿದ್ದಾರೆ. ಪ್ರಧಾನಿ ಅವರು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಗಿಂತ (ಶೇ.58ರಷ್ಟು ಜನಪ್ರಿಯತೆ) 30 ಪಾಯಿಂಟ್‍ಗಳು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಗಿಂತ (ಶೇ.57) 31 ಪಾಯಿಂಟ್ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‍ಗಿಂತ(ಶೇ.39) 49 ಪಾಯಿಂಟ್‍ಗಳಿಂದ ಮುಂದುದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

ಈ ಸಂಸ್ಥೆ ಭಾರತದಲ್ಲಿ 2,464 ಮಂದಿಯನ್ನು ಸಮೀಕ್ಷೆಗೆ ಒಳಪಡಿಸಿ ಆ ಆಧಾರದ ಮೇಲೆ ಅಂ
ಕಿ ಅಂಶ ನೀಡಿದೆ.


Featured Post

ಪ್ರಿಯಾಂಕ ಗಾಂಧಿಗೆ ಕರ್ನಾಟಕ ಚುನಾವಣಾ ಜವಾಬ್ದಾರಿ...!

ಮುಂದಿನ ವರ್ಷ ಕರ್ನಾಟಕ, ರಾಜಸ್ಥಾನದಲ್ಲಿ ಚುನಾವಣೆ ನಡೆಯಲಿದ್ದು, ಈ ಎರಡು ರಾಜ್ಯಗಳ ಚುನಾವಣೆ ಕಾಂಗ್ರೆಸ್ ಪಕ್ಷಕ್ಕೆ ಮಹತ್ವವಾಗಿದೆ. ಚುನಾವಣೆಯಲ್ಲಿ ಗೆಲುವು ಪಡೆಯುವ ದೃ...