Monday, 07.11.2017, 6:47 PM
ಬೆಂಗಳೂರು:ಬಿಜೆಪಿ- ಜೆಡಿಎಸ್ ಸೇರಿ ಎಚ್.ಡಿ. ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಿದೆವು. ಅವರ ಅವಧಿಯಲ್ಲಿ ನಾನು ಒಂದು ತಕರಾರೂ ಮಾಡಲಿಲ್ಲ. ಆದರೆ ನಾನು ಮುಖ್ಯಮಂತ್ರಿ ಆದ ಕೂಡಲೆ ಅಪ್ಪ- ಮಕ್ಕಳು ತಕರಾರು ಮಾಡಿದರು. ನಾನು ಯಾವತ್ತೂ ಕುರ್ಚಿಗೆ ಅಂಟಿಕೊಂಡವಲ್ಲ.
ಪ್ರಪಂಚದಲ್ಲಿ ಎಲ್ಲರೂ ಪ್ರಧಾನಿ ಮೋದಿಯವರ ಆಡಳಿತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮುದ್ರಾ ಯೋಜನೆಯ ಮೂಲಕ ನೀವು ಇನ್ನೊಬ್ಬರ ಮುಂದೆ ಕೈಒಡ್ಡಿ ನಿಲ್ಲುವುದನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ತಾಯಂದಿರು ಗೌರವದಿಂದ ಜೀವನ ನಡೆಸುವಂತಾಗಬೇಕು ಎಂಬುದು ಮೋದಿಯವರ ಉದ್ದೇಶ.
ಇನ್ನು ನಾಲ್ಕೈದು ತಿಂಗಳಿದೆ. ಈ ಸರ್ಕಾರ ಇನ್ನೇನು ಮಾಡಲು ಸಾಧ್ಯ? ದುಡಿಯುವ ಕೈಗೆ ಕೆಲಸ ಕೊಡಲಿಲ್ಲ. ಕೊಟ್ಟಿದ್ದು ಕೇವಲ ಸುಳ್ಳು ಭರವಸೆ. ರಾಜ್ಯದ ಅಭಿವೃದ್ಧಿಗಾಗಿ ನಮಗೆ ಆಶೀರ್ವಾದ ಮಾಡಿ. ಹಾಸನ ಜಿಲ್ಲೆಯನ್ನು ಮಾದರಿ ಜಿಲ್ಲೆಯಾಗಿ ಮಾಡಲು ಶ್ರಮಿಸುವೆ.
ರೈತನ ಹೊಲಕ್ಕೆ ನೀರು ಕೊಡಬೇಕು.. ಬೆಳೆದ ಬೆಳೆಗೆ ಉತ್ತಮ ಬೆಲೆ ಕೊಡಬೇಕು. ಬೆಳೆ ಹಾನಿಯಾದರೆ ಸರಿಯಾದ ಪರಿಹಾರ ಕೊಡಿಸಬೇಕು ಎಂಬುದು ನನ್ನ ಆಸೆ. ಅದಕ್ಕೆ ನಿಮ್ಮ ಬೆಂಬಲ ಬೇಕು.BSY
www.reportperiod.com

No comments:
Post a Comment