ಶ್ರೀನಗರ:ಸೋಮವಾರ ನಡೆದ ಎನ್‌ಕೌಂಟರ್‌ನಲ್ಲಿ ಪಾಕ್ ಮೂಲದ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜಾರ್‌ನ ಸಂಬಂಧಿ ಸೇರಿ ಮೂವರು ಭಯೋತ್ಪಾದಕರನ್ನು ಸದೆಬಡಿಯಲಾಗಿದೆ.
ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆಯ ಹುಟ್ಟಡಗಿಸಲು ಮುಂದಾಗಿರುವ ಭಾರತೀಯ ಸೇನೆ ಮತ್ತೆ ಮೂವರು ಉಗ್ರರನ್ನು ಹೊಡೆದುರುಳಿಸಿದೆ.
ಪುಲ್ವಾಮಾ ಜಿಲ್ಲೆಯ ಅಗ್ಲಾರ್ ಕಂಡಿ ಗ್ರಾಮದಲ್ಲಿ ಸೋಮವಾರ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ಗುಂಡಿನ ಕಾಳಗ ನಡೆದಿತ್ತು. ಮೂವರು ಉಗ್ರರನ್ನು ಭದ್ರತಾ ಸಿಬ್ಬಂದಿ ಹೊಡೆದುರುಳಿಸಿದ್ದಾರೆ. ಸೈನಿಕರ ಗುಂಡಿಗೆ ಹತರಾದ ಮೂವರು ಪೈಕಿ ಉಗ್ರ ಮಸೂದ್ ಅಜಾರ್ ಸಹೋದರ ಸಂಬಂಧಿ, ವಿಭಾಗೀಯ ಉಗ್ರ ಕಮಾಂಡರ್ ತಲ್ಹಾ ರಶೀದ್ ಸಹ ಸೇರಿದ್ದಾನೆ. ಇದನ್ನು ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ವಕ್ತಾರನೇ ಸ್ಪಷ್ಟಪಡಿಸಿದ್ದಾನೆ.
www.reportperiod.com


No comments:
Post a Comment