ಭಾರತೀಯ ಸೇನೆ ಪಾಕಿಸ್ತಾನದ ನೌಶೇರಾ ಸೆಕ್ಟರ್ ನ ಹಲವು ಸೇನಾ ನೆಲೆಗಳ ಮೇಲೆ ದಾಳಿ


ನವದೆಹಲಿ: ಪಾಕಿಸ್ತಾನ ಪ್ರೇರೇಪಿತ ಭಯೋತ್ಪಾದನಾ ಕೃತ್ಯಗಳಿಗೆ ಪ್ರತೀಕಾರವಾಗಿ ಗಡಿನಿಯಂತ್ರಣ ರೇಖೆಯಲ್ಲಿ ದಾಳಿ ನಡೆಸಿದ ಭಾರತೀಯ ಸೇನೆ ಪಾಕಿಸ್ತಾನದ ನೌಶೇರಾ ಸೆಕ್ಟರ್ ನ ಹಲವು ಸೇನಾ ನೆಲೆಗಳಿಗೆ
ಹಾನಿಯುಂಟುಮಾಡಿದೆ. ಈ ಸ್ಥಳದಿಂದ ಉಗ್ರರು ನುಸುಳಲು ಪಾಕಿಸ್ತಾನ ಅನುವುಮಾಡಿಕೊಡುತ್ತಿತ್ತು. 
ಈ ದಾಳಿಯ ನಿಖರವಾದ ಸಮಯವನ್ನು ತಿಳಿಸದ ಮೇಜರ್ ಜನರಲ್ ಅಶೋಕ್ ನರುಲಾ, ಸೇನೆಯ ಈ ಕ್ರಮ ಪಾಕಿಸ್ತಾನದ ನೆಲೆಗಳಲ್ಲಿ ಭಾರಿ ಹಾನಿಯುಂಟು ಮಾಡಿದೆ ಎಂದಿದ್ದಾರೆ. 
ಭಾರತೀಯ ಸೇನೆ ನಡೆಸಿದ ಫಿರಂಗಿ ದಾಳಿಗೆ ಪಾಕಿಸ್ತಾನಿ ಸೇನೆಯ ಬಂಕರ್ ಗಳು ಕೂಡ ಹಾನಿಗೊಂಡಿವೆ ಎಂದು ತಿಳಿಯಲಾಗಿದೆ. 
ಪಾಕಿಸ್ತಾನ ಸೇನೆ ಗಡಿ ನಿಯಂತ್ರಣ ರೇಖೆಯಲ್ಲಿ ಭಯೋತ್ಪಾದಕರು ನುಸುಳಲು ಸಹಕರಿಸುತ್ತಲೇ ಇದ್ದು, ಮುಂದಿನ ದಿನಗಳಲ್ಲಿ ಎತ್ತರದ ಸ್ಥಾನಗಳಲ್ಲಿ ಹಿಮ ಕರಗುವುದರಿಂದ ಇದು ಹೆಚ್ಚಳಗೊಳ್ಳಲಿದೆ ಎನ್ನಲಾಗಿದೆ. 
"ಗಡಿ ನಿಯಂತ್ರಣ ರೇಖೆಯಲ್ಲಿ ನುಸುಳುವಿಕೆಯನ್ನು ತಡೆಗಟ್ಟುವ ಭಯೋತ್ಪಾದಕ ವಿರೋಧಿ ತಂತ್ರಗಾರಿಕೆಯ ಭಾಗವಾಗಿ ಈ ದಾಳಿ ನಡೆದಿದೆ" ಎಂದು ಮೇಜರ್ ಜನರಲ್ ನರುಲಾ ಹೇಳಿದ್ದಾರೆ. 

No comments:

Post a Comment

Featured Post

ಪ್ರಿಯಾಂಕ ಗಾಂಧಿಗೆ ಕರ್ನಾಟಕ ಚುನಾವಣಾ ಜವಾಬ್ದಾರಿ...!

ಮುಂದಿನ ವರ್ಷ ಕರ್ನಾಟಕ, ರಾಜಸ್ಥಾನದಲ್ಲಿ ಚುನಾವಣೆ ನಡೆಯಲಿದ್ದು, ಈ ಎರಡು ರಾಜ್ಯಗಳ ಚುನಾವಣೆ ಕಾಂಗ್ರೆಸ್ ಪಕ್ಷಕ್ಕೆ ಮಹತ್ವವಾಗಿದೆ. ಚುನಾವಣೆಯಲ್ಲಿ ಗೆಲುವು ಪಡೆಯುವ ದೃ...