ಹುತಾತ್ಮ ಯೋಧರ ಕುಟುಂಬಕ್ಕೆ 1 ಕೋಟಿ ಪರಿಹಾರ-ರಾಜನಾಥ್‌ ಸಿಂಗ್‌


''ನಮ್ಮ ಯೋಧರ ತ್ಯಾಗ, ಬಲಿದಾನಗಳಿಗೆ ಹಣದ ಮೂಲಕ ಪರಿಹಾರ ತುಂಬಲು ಸಾಧ್ಯವಿಲ್ಲ. ಆದರೆ ಹುತಾತ್ಮರ ಕುಟುಂಬದವರು ಯಾವುದೇ ತೊಂದರೆ ಅನುಭವಿಸಬಾರದು. ಹೀಗಾಗಿ ಪ್ರತಿ ಪ್ಯಾರಾ ಮಿಲಿಟರಿ ಯೋಧರ ಕುಟುಂಬದವರಿಗೆ ಒಂದು ಕೋಟಿ ರೂಪಾಯಿ ಪರಿಹಾರ ನೀಡಲಾಗುವುದು,'' ಎಂದು ಹೇಳಿದರು.

ಕರ್ತವ್ಯದ ವೇಳೆ ಹುತಾತ್ಮರಾಗುವ ಅರೆ ಸೇನಾಪಡೆ ಯೋಧರ ಕುಟುಂಬಗಳಿಗೆ ತಲಾ 1 ಕೋಟಿ ರೂ. ಪರಿಹಾರ ನೀಡಲಾಗುವುದು ಎಂದು ಗೃಹ ಸಚಿವ ರಾಜನಾಥ್‌ ಸಿಂಗ್‌ ಘೋಷಿಸಿದ್ದಾರೆ.
34,000 ಅರೆ ಸೇನಾಪಡೆ ಪೇದೆಗಳನ್ನು ಮುಖ್ಯ ಪೇದೆಗಳ ಹುದ್ದೆಗೆ ಮೇಲ್ದರ್ಜೆಗೇರಿಸಲಾಗುವುದು ಎಂದು ಸಹ ಅವರು ಪ್ರಕಟಿಸಿದ್ದಾರೆ. ಇಲ್ಲಿನ ಶೆರತಂಗ್‌ ಗಡಿ ಔಟ್‌ಪೋಸ್ಟ್‌ನಲ್ಲಿ ಶನಿವಾರ 'ಇಂಡೊ-ಟಿಬೆಟ್‌ ಗಡಿ ಪೊಲೀಸ್‌ ಪಡೆ'ಯ (ಐಟಿಬಿಪಿ) ಸೈನಿಕ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಅವರು, ಅರೆ ಸೇನಾಪಡೆ ಯೋಧರ ತ್ಯಾಗ, ಬಲಿದಾನಗಳ ಬಗ್ಗೆ ದೇಶ ಹೆಮ್ಮೆಪಡುತ್ತದೆ ಎಂದು ಹೇಳಿದರು.

No comments:

Post a Comment

Featured Post

ಪ್ರಿಯಾಂಕ ಗಾಂಧಿಗೆ ಕರ್ನಾಟಕ ಚುನಾವಣಾ ಜವಾಬ್ದಾರಿ...!

ಮುಂದಿನ ವರ್ಷ ಕರ್ನಾಟಕ, ರಾಜಸ್ಥಾನದಲ್ಲಿ ಚುನಾವಣೆ ನಡೆಯಲಿದ್ದು, ಈ ಎರಡು ರಾಜ್ಯಗಳ ಚುನಾವಣೆ ಕಾಂಗ್ರೆಸ್ ಪಕ್ಷಕ್ಕೆ ಮಹತ್ವವಾಗಿದೆ. ಚುನಾವಣೆಯಲ್ಲಿ ಗೆಲುವು ಪಡೆಯುವ ದೃ...